Home
ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ - 2011 ರ ಉದ್ಘಾಟಣಾ ಕಾರ್ಯಕ್ರಮ
♦ WELCOME TO WEBSITE OF TOWN MUNICIPAL COUNCIL BAILHONGAL ♦
ಬೈಲಹೊಂಗಲ ನಗರದ ಬಗ್ಗೆ
ಬೈಲಹೊಂಗಲ ಪಟ್ಟಣವು ಬೆಳಗಾವಿಯಿಂದ ಪೂರ್ವಕ್ಕೆ 44 ಕಿ ಮೀ ಅಂತರದಲ್ಲಿ ಇದೆ. ಬೈಲಹೊಂಗಲ ಪಟ್ಟಣವು ಉಪವಿಭಾಗ ಹಾಗೂ ತಾಲೂಕಾ ಕೇಂದ್ರ ಸ್ಥಾನವಿದ್ದು,ಪಟ್ಟಣದ ಜನಸಂಖ್ಯೆಯು 2001 ಜನಗಣತಿಯ ಪ್ರಕಾರ 43215 ಇರುತ್ತದೆ.ಇತಿಹಾಸ ಪ್ರಸಿದ್ದವಾದ ಕನ್ನಡ ನಾಡಿನ ವೀರರಾಣಿ ಕಿತ್ತೂರ ಚನ್ನಮಾಜಿಯವರು ಇಲ್ಲಿಯೇ ಸ್ವರ್ಗವಾಸಿಯಾಗಿದ್ದು, ಅವರ ಸಮಾಧಿಯು ಇಲ್ಲಿಯೇ ಇದೆ. ಇಲ್ಲಿ ಪ್ರತಿ ಸೋಮವಾರ ,ಬುಧವಾರ ಹಾಗೂ ಶುಕ್ರವಾರ ದಿನಗಳಂದು ಸಂತೆ ನಡೆಯುವದು.ಪುರಸಭೆ ವತಿಯಿಂದ ಎರಡು ಹೈಸ್ಕೂಲಗಳು ನಡೆಯುತ್ತಿವೆ.ಅವುಗಳಲ್ಲಿ ಒಂದು ಗಂಡು ಮಕ್ಕಳಿಗಾಗಿ ಹಾಗೂ ಇನ್ನೋಂದು ಹೆಣ್ಣು ಮಕ್ಕಳ ಸಲುವಾಗಿ ಬೇರೆ ಬೇರೆಯಾಗಿ ನಡೆಯುತ್ತಿವೆ.ಅಲ್ಲದೆ ಮೂರು ಸಾವಿರಮಠ ವತಿಯಿಂದ ಒಂದು ಹೈಸ್ಕೂಲ ಹಾಗೂ ಒಂದು ವೃತ್ತಿ ತರಬೇತಿ ಸಂಸ್ಥೆಯನ್ನು ನಡೆಸಲಾಗುತ್ತಿದೆ.ಇದು ಅಲ್ಲದೇ ಕೆ.ಆರ್.ಸಿ.ಇ. ಸಂಸ್ಥೆಯವರು ಕಲಾ, ವಿಜ್ಙಾನ, ವಾಣಿಜ್ಯ ಹಾಗೂ ಕಾನೂನು ಮಹಾ ವಿಧ್ಯಾಲಯಗಳನ್ನು ನಡೆಸುತ್ತದ್ದಾರೆ.ಇಲ್ಲಿ 25 ಸರಾಸರಿ ಪ್ರಾಥಮಿಕ ಕನ್ನಡ ಶಾಲೆಗಳು ಹಾಗೂ 2ಪ್ರಾಥಮಿಕ ಉರ್ದು ಶಾಲೆಗಳು ಇವೆ. ಒಂದು ಉರ್ದು ಹೈಸ್ಕೂಲ ಸಹ ಇರುತ್ತದೆ.ಅಲ್ಲದೇ ಒಂದು ಮಹಿಳಾ ಕಾಲೇಜ ಸಹ ಇದೆ.ಹಾಗೂ ಪದವಿ ಪೂರ್ವ ಕಾಲೇಜ 2,ಪದವಿ ಕಾಲೇಜ 4,ಪಾಲಿಟೆಕ್ನಿಕ್ 1 ಹಾಗೂ 1ಲಾ-ಕಾಲೇಜ ಇರುತ್ತದೆ. ಬೈಲಹೊಂಗಲ ಪಟ್ಟಣದಲ್ಲಿ ಕೃಷಿ ಪ್ರದಾನವಾಗಿದೆ.ಹತ್ತಿ ಜೋಳ ,ಗೋವಿನಜೋಳ,ಶೇಂಗಾ ಗೋಧಿ ಇವು ಮುಖ್ಯ ಬೆಳೆಯಾಗಿತ್ತದೆ.ಇಲ್ಲಿ ಜಿನ್ನಿಂಗ್ ಹಾಗೂ ಪ್ರೆಸ್ಸಿಂಗ್ ಫ್ಯಾಕ್ಟರಿಗಳು ಎಣ್ಣೆ ತೆಗೆಯುವ ಕಾರ್ಖಾನೆಗಳು ಸಹ ಇರುತ್ತವೆ.ನಗೆರದಲ್ಲಿ 2ಚಲನ ಚಿತ್ರ ಮಂದಿರಗಳು ಹಾಗೂ 4 ಉದ್ಯಾನವನಗಳು ಇರುತ್ತದೆ.
Brief About Bailhongal Town
Bailhongal being a Taluka of Belgaum district,its head quarter is situated at the distance of 43 Kms from Belgaum and 560Kms from Bangalore,appears to have derived its name from the fact that it stands on a rising ground in the middle of bayalu or vast plain area.Formerly,this area around about Bailhongal was known as kundoranadu having special status and significance,thecivic body here was formed in 1919.the Ramalingeshwar temlpe have locally called karigudi,situated outside the ruined fort wall appears to have been a jaina temple originally.It was in Bailhongal fort that Rani channamma of kittur was kept under detention from 1824 till her death in1829.the local veerashaiva matha known as kalmatha has the tomb of this brave queen.The noted among them are two headed Ganesha from Sangolli which is also the place of Rayanna a noted here of kittur revolt.Three in no forest area in the region of Bailhongal the surrounding fields are well cultivated and depends only on monsoons. The town in categorised as a multifunctional one with ginning Mills,trade and commerce as primary activities.The town has a number of ginning Mills and Oil Mills.It is a major commercial center in the region.
ಗಣಕೀಕರಣ:ಬೈಲಹೊಂಗಲ ಪುರಸಭೆ ವ್ಯಾಪ್ತಿಯಲ್ಲಿ ಆದ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು,ಸಾರ್ವಜನಿಕರು ತಮಗೆ ಸಂಬಂಧ ಪಟ್ಟ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಶುಲ್ಕವನ್ನು ಪಾವತಿಸಿ ಆನ್‌ಲೈನ್ ಮುಖಾಂತರ ಪುರಸಭೆ ಬೈಲಹೊಂಗಲದಲ್ಲಿ ಪಡೆಯಬಹುದಾಗಿದೆ.ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮಗಾಗುತ್ತಿರುವ ಕುಂದು ಕೊರತೆಗಳನ್ನು ಪುರಸಭೆಯ ಸಹಾಯವಾಣಿ (ದೂರವಾಣಿ)ಸಂಖ್ಯೆ : 08288-237777 ದಿನದ 24 ಘಂಟೆಯೂ ಅರ್ಜಿ,ಪೊನ್ ಹಾಗೂ ಆನ್‌ಲೈನ್ ಮುಖಾಂತರ ದೂರುಗಳನ್ನು ನೊಂದಾಯಿಸಿ ಸಹಾಯವಾಣಿಯಿಂದ ದೂರಿನ ಸಂಖ್ಯೆ (ಕಂಪ್ಲೇಟ್ ನಂ)ಪಡೆಯಬಹುದಾಗಿದೆ.
In the News
ಸಾಮಾನ್ಯ ಸಭೆಯ ನೋಟೀಸ್ ದಿನಾಂಕ 21/04/2012
ದಿನಾಂಕ 12/03/2012 ರಂದು ಪರಸಭೆಯಲ್ಲಿ 22.75%,7.25%,3% ರ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಾಮಗ್ರಿ ವಿತರಣಾ ಸಮಾರಂಭ ನಡೆಸಲಾಯಿತು.ಹೆಚ್ಚಿನ ಮಾಹಿತಿಗಾಗಿ ಕ್ಲಿಕ ಮಾಡಿ.
ಪುರಸಭೆ ಬಜೆಟ್ ಮಂಡನೆ:ದಿನಾಂಕ 28/02/2012 ರಂದು ನಡೆದ ಬೈಲಹೊಂಗಲ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸನ್ 2012-13 ನೇ ಸಾಲಿನ ಆಯವ್ಯಯ ಮಂಡನೆಯನ್ನು ಮುಖ್ಯಾಧಿಕಾರಿ ಶ್ರೀ ಎ.ಎಸ್.ರಾಣೆ ಮಂಡಿಸಿದರು ಬಜೆಟ್ ಕುರಿತಾದ ಚರ್ಚೆಯಲ್ಲಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು,ಲೇಖಪಾಲಕಿ ಶ್ರೀಮತಿ ಸೋನಾಲಿ.ಕೆ.ಬುಬನಾಳೆ ಇಲಾಖಾವಾರು ಹಣ ವಿಂಗಡಣೆಯ ವಿವರಗಳನ್ನು ಸಭೆಗೆ ತಿಳಿಸಿದರು.ಬಜೆಟ್‌ಗೆ ಸಭೆಯು ಸರ್ವಾನುಮತದ ಅನುಮೋದನೆ ನೀಡಿತು.
ಅಲ್ಪಾವಧಿ ಟೆಂಡರ್ ಪ್ರಕಟಣೆ : ಸನ್ 2011-12 ನೇ ಸಾಲಿನ ಎಸ್ ಎಪ್ ಸಿ ಅನುದಾನದ ಯೋಜನೆಯಡಿ ಟೆಂಡರ್‌ಗಳನ್ನು ಅಹ್ವಾನಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
"This Page Is Maintained By Shri A S Rane Chief Officer TMC Bailhongal"

